Phone icon  CALL US NOW
080 - 22161900

  • ಮೂಕಜ್ಜಿಯ ಕನಸುಗಳು (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)|Mookajjiya Kanasugalu (Jnanpith Award Winning Book)
ಮೂಕಜ್ಜಿಯ ಕನಸುಗಳು (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)|Mookajjiya Kanasugalu (Jnanpith Award Winning Book)
10%

MRP - ₹250.00 ₹225.00

ಡಾ. ಶಿವರಾಮ ಕಾರಂತರು ರಚಿಸಿರುವ ಒಂದು ಮೂಕಜ್ಜಿಯ ಕನಸುಗಳು ಕಾದಂಬರಿ. ಈ ಕಾದಂಬರಿಗೆ ೧೯೭೭ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅಜ್ಜಿ ಮತ್ತು ಮೊಮ್ಮಗನ ನಡುವೆ ನಡೆಯೋ ಸಂಭಾಷಣೆಯನ್ನು ಶಿವರಾಮ ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಮೊಮ್ಮಗನ ಪ್ರಶ್ನೆಗಳಿಗೆ ಅಜ್ಜಿ ತನ್ನ ಅನಿಸಿಕೆಗಳನ್ನು ಹೇಳುತ್ತಾ ಇಂದಿನ ಜಮಾನದ ಜನತೆಗೆ ಇರುವ ಹಲವು ಬಗೆಯ ಗೊಂದಲಗಳನ್ನು ಬಿಡಿಸಿ ತಿಳಿಸಿದ್ದಾರೆ.ಈ ಕಾದಂಬರಿಯಲ್ಲಿ ಬರುವ ಮೂಕಜ್ಜಿಗೆ ಒಂದು ಅಚ್ಚರಿಯಾದ ಶಕ್ತಿ ಇರುತ್ತದೆ.ಅದೇನೆಂದರೆ,ಯಾವುದೇ ವಸ್ತು ಅಥವಾ ಮನುಷ್ಯನನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುತ್ತವೆ.ಅಂದರೆ ಇವು ನಿದ್ದೆಯಲ್ಲಿ ಬರುವ ಕನಸುಗಳಲ್ಲ.ಎಚ್ಚರವಿದ್ದಾಗ ಬರುವ ಕನಸುಗಳು. ಈ ಕಾದಂಬರಿಯ ಕಥಾನಾಯಕಿ, ಮೂಕಜ್ಜಿ, ತನ್ನ ಕನಸುಗಳ ಬಗ್ಗೆ ಅವಳ ಮೊಮ್ಮಗನ ಹತ್ತಿರ ಹೇಳಿಕೊಳ್ಳುತ್ತಾಳೆ. ಈ ಕನಸುಗಳು ಮನುಷ್ಯನ ಸಾಮಾಜಿಕ ಬೆಳವಣಿಗೆಗಳು ಮತ್ತು ದೇವರ ಸ್ವರೂಪದ ಬಗ್ಗೆ ಇರುತ್ತದೆ.ಇಲ್ಲಿ ಹಲವು ಪಾತ್ರಗಳು ಬಂದು ಹೋದರು ಅಜ್ಜ್ಜಿ ಮತ್ತು ಮೊಮ್ಮಗನ ಪಾತ್ರಗಳು ಮುಖ್ಯವಾದವು ತಂತಮ್ಮ ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನರ ಕಥೆಯೂ ಇಲ್ಲಿದೆ. ಅದರಿಂದಾಗಿ ಇಂದಿನ ನಮಗೆ ಕೇಳಿಸದೇ ಹೋದ ಕೆಲವು ಯಾತನೆಯ ಧ್ವನಿಗಳನ್ನು ಲೇಖಕರು ಬಹಳ ಸೊಗಸಾಗಿ ಪುಟಗಳ ಮೇಲೆ ತಂದಿದ್ದಾರೆ. ಕಾರoತರ ಈ ಕಾದoಬರಿಯು ಕರ್ನಾಟಕದ ಕರಾವಳಿಯ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಕಾದಂಬರಿಯು ಪ್ರಾಚೀನಕಾಲದಿಂದ ನಂಬಿಕೊಂಡು ಬಂದಿರುವ ಸಂಪ್ರದಾಯಗಳನ್ನು, ದೇವರ ಅಸ್ತಿತ್ವವನ್ನು, ಇತಿಹಾಸ ಪರಂಪರೆಯನ್ನು, ಧಾರ್ಮಿಕ ವಿಧಿವಿಧಾನಗಳನ್ನು ಮತ್ತು ಅವುಗಳ ಹಿನ್ನಲೆಯನ್ನು ಅನ್ವೇಷಿಸುತ್ತದೆ. ಕಥೆಯು ಹಳ್ಳಿ ಜೀವನದ ಮಗ್ಗಲುಗಳನ್ನು, ಕೌಟುಂಬಿಕ ಸಂಬಂಧಗಳನ್ನು, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡುತ್ತದೆ. ಕಥೆಯು ಹೆಚ್ಚ್ರಾಗಿ ಕರಾವಳಿಯ ಕನ್ನಡವನ್ನು ಬಳಸುತ್ತದೆ. ಸುಬ್ಬರಾಯನು ಕುತೂಹಲದ ವ್ಯಕ್ತಿ. ಅವನಿಗೆ ತಾನು ಚಿಕ್ಕವನಿಂದ ಕೇಳಿಕೊಂಡು ಬಂದಿರುವ ಕಥೆಗಳ ಹಿನ್ನಲೆ ಏನೆಂದು ತಿಳಿಯುವ ಕುತೂಹಲ. ಮೂಕಜ್ಜಿಯು ಸುಬ್ಬರಾಯನ ಅಜ್ಜಿ, ಅವಳ ಹೆಸರು ದೇವಿ ಮೂಕಾಂಬಿಕೆ ಮೇಲೆ ಇಡಲಾಗಿದೆ, ಅವಳೊಬ್ಬ ಅನಕ್ಷರಸ್ಥೆ, ವಿಧವೆ. ಕಥೆಯಲ್ಲಿ ಮೂಕಜ್ಜಿಗೆ ವಿಶೇಷವಾದ ಗ್ರಹಣಶಕ್ತಿ ಇದೆ. ಅವಳಿಗೆ ಹಿಂದೆ ನಡೆದುಹೋದ ಘಟನೆಗಳ ಮತ್ತು ಈಗ ಅಗುತ್ತಿರುವ ಘಟನೆಗಳ ಅರಿವಿದೆ. ಸುಬ್ಬರಾಯನು ತನ್ನ ಅಜ್ಜಿಯ ಜೊತೆ ನಡೆಸುವ ಚರ್ಚೆಗಳು ಕಾದಂಬರಿಯ ಜೀವಾಳವಾಗಿದೆ.

Dispatched within 2 - 3 Business Days

 FREE Home Delivery (For purchase of Rs 499/- and above)

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿ (೧೯೭೭)

Product Specifications

: 51
: 2025
: Hardbound
: 1/8 Crown Size
: 280
: 9788172850623
: B-1150006
: 280 Gms

ಡಾ. ಶಿವರಾಮ ಕಾರಂತರು ರಚಿಸಿರುವ ಒಂದು ಮೂಕಜ್ಜಿಯ ಕನಸುಗಳು ಕಾದಂಬರಿ. ಈ ಕಾದಂಬರಿಗೆ ೧೯೭೭ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅಜ್ಜಿ ಮತ್ತು ಮೊಮ್ಮಗನ ನಡುವೆ ನಡೆಯೋ ಸಂಭಾಷಣೆಯನ್ನು ಶಿವರಾಮ ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಮೊಮ್ಮಗನ ಪ್ರಶ್ನೆಗಳಿಗೆ ಅಜ್ಜಿ ತನ್ನ ಅನಿಸಿಕೆಗಳನ್ನು ಹೇಳುತ್ತಾ ಇಂದಿನ ಜಮಾನದ ಜನತೆಗೆ ಇರುವ ಹಲವು ಬಗೆಯ ಗೊಂದಲಗಳನ್ನು ಬಿಡಿಸಿ ತಿಳಿಸಿದ್ದಾರೆ.ಈ ಕಾದಂಬರಿಯಲ್ಲಿ ಬರುವ ಮೂಕಜ್ಜಿಗೆ ಒಂದು ಅಚ್ಚರಿಯಾದ ಶಕ್ತಿ ಇರುತ್ತದೆ.ಅದೇನೆಂದರೆ,ಯಾವುದೇ ವಸ್ತು ಅಥವಾ ಮನುಷ್ಯನನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುತ್ತವೆ.ಅಂದರೆ ಇವು ನಿದ್ದೆಯಲ್ಲಿ ಬರುವ ಕನಸುಗಳಲ್ಲ.ಎಚ್ಚರವಿದ್ದಾಗ ಬರುವ ಕನಸುಗಳು. ಈ ಕಾದಂಬರಿಯ ಕಥಾನಾಯಕಿ, ಮೂಕಜ್ಜಿ, ತನ್ನ ಕನಸುಗಳ ಬಗ್ಗೆ ಅವಳ ಮೊಮ್ಮಗನ ಹತ್ತಿರ ಹೇಳಿಕೊಳ್ಳುತ್ತಾಳೆ. ಈ ಕನಸುಗಳು ಮನುಷ್ಯನ ಸಾಮಾಜಿಕ ಬೆಳವಣಿಗೆಗಳು ಮತ್ತು ದೇವರ ಸ್ವರೂಪದ ಬಗ್ಗೆ ಇರುತ್ತದೆ.ಇಲ್ಲಿ ಹಲವು ಪಾತ್ರಗಳು ಬಂದು ಹೋದರು ಅಜ್ಜ್ಜಿ ಮತ್ತು ಮೊಮ್ಮಗನ ಪಾತ್ರಗಳು ಮುಖ್ಯವಾದವು ತಂತಮ್ಮ ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನರ ಕಥೆಯೂ ಇಲ್ಲಿದೆ. ಅದರಿಂದಾಗಿ ಇಂದಿನ ನಮಗೆ ಕೇಳಿಸದೇ ಹೋದ ಕೆಲವು ಯಾತನೆಯ ಧ್ವನಿಗಳನ್ನು ಲೇಖಕರು ಬಹಳ ಸೊಗಸಾಗಿ ಪುಟಗಳ ಮೇಲೆ ತಂದಿದ್ದಾರೆ. ಕಾರoತರ ಈ ಕಾದoಬರಿಯು ಕರ್ನಾಟಕದ ಕರಾವಳಿಯ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಕಾದಂಬರಿಯು ಪ್ರಾಚೀನಕಾಲದಿಂದ ನಂಬಿಕೊಂಡು ಬಂದಿರುವ ಸಂಪ್ರದಾಯಗಳನ್ನು, ದೇವರ ಅಸ್ತಿತ್ವವನ್ನು, ಇತಿಹಾಸ ಪರಂಪರೆಯನ್ನು, ಧಾರ್ಮಿಕ ವಿಧಿವಿಧಾನಗಳನ್ನು ಮತ್ತು ಅವುಗಳ ಹಿನ್ನಲೆಯನ್ನು ಅನ್ವೇಷಿಸುತ್ತದೆ. ಕಥೆಯು ಹಳ್ಳಿ ಜೀವನದ ಮಗ್ಗಲುಗಳನ್ನು, ಕೌಟುಂಬಿಕ ಸಂಬಂಧಗಳನ್ನು, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡುತ್ತದೆ. ಕಥೆಯು ಹೆಚ್ಚ್ರಾಗಿ ಕರಾವಳಿಯ ಕನ್ನಡವನ್ನು ಬಳಸುತ್ತದೆ. ಸುಬ್ಬರಾಯನು ಕುತೂಹಲದ ವ್ಯಕ್ತಿ. ಅವನಿಗೆ ತಾನು ಚಿಕ್ಕವನಿಂದ ಕೇಳಿಕೊಂಡು ಬಂದಿರುವ ಕಥೆಗಳ ಹಿನ್ನಲೆ ಏನೆಂದು ತಿಳಿಯುವ ಕುತೂಹಲ. ಮೂಕಜ್ಜಿಯು ಸುಬ್ಬರಾಯನ ಅಜ್ಜಿ, ಅವಳ ಹೆಸರು ದೇವಿ ಮೂಕಾಂಬಿಕೆ ಮೇಲೆ ಇಡಲಾಗಿದೆ, ಅವಳೊಬ್ಬ ಅನಕ್ಷರಸ್ಥೆ, ವಿಧವೆ. ಕಥೆಯಲ್ಲಿ ಮೂಕಜ್ಜಿಗೆ ವಿಶೇಷವಾದ ಗ್ರಹಣಶಕ್ತಿ ಇದೆ. ಅವಳಿಗೆ ಹಿಂದೆ ನಡೆದುಹೋದ ಘಟನೆಗಳ ಮತ್ತು ಈಗ ಅಗುತ್ತಿರುವ ಘಟನೆಗಳ ಅರಿವಿದೆ. ಸುಬ್ಬರಾಯನು ತನ್ನ ಅಜ್ಜಿಯ ಜೊತೆ ನಡೆಸುವ ಚರ್ಚೆಗಳು ಕಾದಂಬರಿಯ ಜೀವಾಳವಾಗಿದೆ.

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ. ಕಾರಂತರ ‘ಮರಳಿ ಮಣ್ಣಿಗೆ“ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು “ಮರಳಿ ಮಣ್ಣಿಗೆ“ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವರು.

Books from ಶಿವರಾಮ ಕಾರಂತ ಕೆ, Shivarama Karantha K

Author-Image
ಶಿವರಾಮ ಕಾರಂತ ಕೆ, Shivarama Karantha K

About Author

Similar Books