ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ನವಕರ್ನಾಟಕ ಪ್ರಕಾಶನ : ಭಾರತೀಯ ಪ್ರಕಾಶಕರ ಒಕ್ಕೂಟ, ನವದೆಹಲಿ ವತಿಯಿಂದ ನವಕರ್ನಾಟಕ ಪ್ರಕಾಶನ ಪ್ರಕಟಿಸಿದ `ಪಕ್ಷಿಗಳ ವಿಸ್ಮಯ ವಿಶ್ವ’ ಪುಸ್ತಕಕ್ಕೆ ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ (2023-24)

ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ನವಕರ್ನಾಟಕ ಪ್ರಕಾಶನ : ಭಾರತೀಯ ಪ್ರಕಾಶಕರ ಒಕ್ಕೂಟ, ನವದೆಹಲಿ ವತಿಯಿಂದ ನವಕರ್ನಾಟಕ ಪ್ರಕಾಶನ ಪ್ರಕಟಿಸಿದ `ಪಕ್ಷಿಗಳ ವಿಸ್ಮಯ ವಿಶ್ವ’ ಪುಸ್ತಕಕ್ಕೆ ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ (2023-24)

Phone icon  CALL US NOW
080 - 22161900

Our Story

ನವಕರ್ನಾಟಕ ಪ್ರಕಾಶನ ಕಳೆದ ಆರು ದಶಕಗಳೂ ಮೀರಿದಂತೆ ಪುಸ್ತಕಗಳ ಪ್ರಕಾಶನ-ಪ್ರದರ್ಶನ-ಮಾರಾಟ ಚಟುವಟಿಕೆ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದಾದ್ಯಂತ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಬಂದಿದೆ. 'ಪುಸ್ತಕಗಳ ಮೂಲಕ ಮಾನವ ಕುಲದ ಸೇವೆ' ಎಂಬುದೇ ಇದರ ಧ್ಯೇಯ ವಾಕ್ಯ.

ಈವರೆಗೆ ಸುಮಾರು ೬೦೦೦ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರತಂದಿರುವ ನವಕರ್ನಾಟಕ ಪ್ರಕಾಶನವು, ಜನಪರ ಸಾಹಿತ್ಯದ ಪ್ರಸಾರದ ಮೂಲಕ ನಾಡಿನ ಬುದ್ಧಿಜೀವಿಗಳಿಂದ ಹಿಡಿದು ಶ್ರೀಸಾಮಾನ್ಯರ ವರೆಗೆ ಓದುಗರ ದೊಡ್ಡ ಬಳಗವನ್ನೇ ಹೊಂದಿದೆ. ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಕಲಬುರಗಿ ನಗರಗಳಲ್ಲಿ ಸುಸಜ್ಜಿತ ಖಾಯಂ ಮಳಿಗೆಗಳನ್ನು ಹೊಂದಿದೆ. ವಿದ್ಯುನ್ಮಾನ ಪುಸ್ತಕ (e-book) ಹಾಗೂ ಕೇಳು ಪುಸ್ತಕ (audio-book)ಗಳ ಪ್ರಕಟಣೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.

ತನ್ನ ಪ್ರಕಟಣೆಗಳ ಮೂಲಕ ಎಲ್ಲ ಪ್ರಗತಿಪರ, ಜನಪರ ಚಳುವಳಿಗಳೊಂದಿಗೆ ಗುರುತಿಸಿಕೊಂಡಿರುವ ಸಂಸ್ಥೆಯು ೧೯೯೯ರಿಂದ ಪತ್ರಿಕಾರಂಗದಲ್ಲೂ ಸೇವೆ ಸಲ್ಲಿಸುತ್ತ ಬಂದಿದೆ. ಸಮಕಾಲೀನ ವಿಷಯಗಳಿಗೆ ಸ್ಪಂದಿಸುತ್ತ ಓದುಗರನ್ನು ಚಿಂತನೆಗೆ ಪ್ರಚೋದಿಸುವ 'ಹೊಸತು' ತಿಂಗಳ ಪತ್ರಿಕೆ 'ನೆಮ್ಮದಿಯ ನಾಳೆ ನಮ್ಮದು' ಎಂಬ ಆಶಯದೊಂದಿಗೆ ಪ್ರಜ್ಞಾವಂತ ಓದುಗರ ಆತ್ಮೀಯ ಸಂಗಾತಿಯಾಗಿ ರೂಪುಗೊಂಡಿದೆ.

ನವಕರ್ನಾಟಕ ಪ್ರಕಾಶನ ಸಂಸ್ಥೆ ತನ್ನ ಪ್ರಕಟಣೆಗಳ ಜೊತೆಗೆ ನಾಡಿನ ಇತರ ಪ್ರಕಾಶಕರ/ಲೇಖಕರ ಪುಸ್ತಕಗಳನ್ನೂ ನಿರಂತರವಾಗಿ ಹಾಗೂ ವ್ಯಾಪಕವಾಗಿ ವಿತರಿಸುತ್ತ ಓದುಗರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದೆ.

About our Company

Navakarnataka Publications has been, for the last six decades(Estd:1960), consistently striving to develop book-culture by way of publication and distribution of books dealing with a wide range of subjects.

Our Mission

"Service to Mankind through Books"

Description

Navakarnataka has set high standards in the field of book publishing and distribution. It has always sought to reach different strata of readers by organizing book exhibitions and cultural activities, mainly in Karnataka. Besides, in order to reach the commonest of readers it has been adopting innovative schemes and sales promotion activities.

Navakarnataka has so far published more than 6000 titles, most of them are in Kannada and around four hundred in English. Many of its titles have seen several reprints, a testimony to their popularity. This publishing house has won many prestigious awards. Navakarnataka has its own sales outlets in Bengaluru, Mysuru, Mangaluru and Kalaburgi. Apart from printed editionrs, it is also engaged in publishing e books and audio books.

Navakarnataka has the largest collection of Kannada books published by various publishers/ authors and it is well known for providing the best of services to the readers.