Phone icon  CALL US NOW
080 - 22161900

‘ಹೊಸತು’ ತಿಂಗಳ ಪತ್ರಿಕೆಯ ಕಿರು ಪರಿಚಯ


ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗುತ್ತಿರುವ ‘ಹೊಸತು’ ತಿಂಗಳ ಪತ್ರಿಕೆ, ‘ನೆಮ್ಮದಿಯ ನಾಳೆ ನಮ್ಮದು’ ಎಂಬ ಘೋಷವಾಕ್ಯದೊಂದಿಗೆ ೧೯೯೯ರಿಂದ ಪ್ರಕಟವಾಗುತ್ತಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ, ಕೃಷಿ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ವಿಜ್ಞಾನ, ತತ್ವಜ್ಞಾನಕ್ಕೆ ಸಂಬಂಧಪಟ್ಟ ಹಾಗೂ ಇತರೆ ಹಲವಾರು ವಿಷಯಗಳ ಕುರಿತು ಉನ್ನತ ಮಟ್ಟದ ಲೇಖನಗಳನ್ನು ಇದು ಒಳಗೊಂಡಿರುತ್ತದೆ. ಕರ್ನಾಟಕದ ವೈಚಾರಿಕ ಮತ್ತು ಪ್ರಗತಿಪರ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರದಲ್ಲಿರುವ ಈ ಪತ್ರಿಕೆ ಜನಪರವಾದ ನಿಲುವನ್ನು ಹೊಂದಿದೆ. ನಾಡಿನ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಮಹನೀಯರ ಕುರಿತು, ಪ್ರಗತಿಪರ ಚಿಂತನೆಯುಳ್ಳ ವಿಶ್ವದ ಹಲವಾರು ವ್ಯಕ್ತಿಗಳ ಕುರಿತು ಸಂದರ್ಶನ, ಲೇಖನ ಈ ಪತ್ರಿಕೆಯ ಮಹತ್ವದ ಅಂಶಗಳು. ಕರ್ನಾಟಕವನ್ನೂ ಒಳಗೊಂಡಂತೆ ವಿಶ್ವದಾದ್ಯಂತ ಜರುಗುವ ಮಹತ್ವದ ವಿದ್ಯಮಾನಗಳನ್ನು ಜನಪರ ನಿಲುವಿನಿಂದ ವಿಶ್ಲೇಷಿಸುವ ಲೇಖನಗಳು ‘ಹೊಸತು’ ಪತ್ರಿಕೆಯ ಮಹತ್ವದ ಭಾಗ. ಕವಿತೆ, ಕತೆ, ವಿಮರ್ಶೆ, ಹೊಸ ಮೌಲಿಕ ಪುಸ್ತಕಗಳ ಪರಿಚಯ ಹೀಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕೊಡುಗೆ ನೀಡುತ್ತಿದೆ. ಚಿತ್ರಕಲೆ, ವ್ಯಂಗ್ಯಚಿತ್ರಗಳನ್ನು ಪ್ರಕಟಿಸುವುದರ ಮೂಲಕ ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಿದೆ. ಪ್ರತಿ ತಿಂಗಳು ೬೪ ಪುಟಗಳಲ್ಲಿ ಬರುವ ಈ ಪತ್ರಿಕೆ ಪ್ರತಿ ಹೊಸ ವರ್ಷದ ಮೊದಲ ತಿಂಗಳು (ಜನವರಿ) ಸುಮಾರು ೨೫೦ ಪುಟಗಳ ವಿಶೇಷ ಸಂಚಿಕೆಯನ್ನು ಪ್ರಕಟಿಸುತ್ತಿದೆ. ಈ ವಿಶೇಷ ಸಂಚಿಕೆಗಳು ಬೌದ್ಧಿಕ ಹಸಿವುಳ್ಳ ಓದುಗರಿಗೆ ಸಂಗ್ರಹ ಯೋಗ್ಯವಾಗಿವೆ.

ನಾಡಿನ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಎಚ್.ಎಸ್. ದೊರೆಸ್ವಾಮಿಯವರು ‘ಹೊಸತು’ವಿನ ಆಗಸ್ಟ್ ೧೯೯೯ರ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಿದ್ದರು. ಡಾ|| ಜಿ.ಆರ್ ಎಂದೇ ಪ್ರಖ್ಯಾತರಾಗಿರುವ ಚಿಂತಕ, ಮೇಧಾವಿ, ಹಲವು ಭಾಷೆಗಳನ್ನು ತಿಳಿದಿರುವ ಹೆಸರಾಂತ ವಿದ್ವಾಂಸರು, ಪ್ರಪಂಚಾದ್ಯಂತ ಶಿಷ್ಯರನ್ನು ಹೊಂದಿರುವ ಪ್ರೀತಿಯ ಮೇಷ್ಟ್ರು ಡಾ|| ಜಿ. ರಾಮಕೃಷ್ಣ ಅವರು ಮೊದಲ ೧೨ ವರುಷಗಳ ಕಾಲ ಸಂಪಾದಕರಾಗಿದ್ದರು. ಈಗ ಗೌರವ ಸಂಪಾದಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಈಗ ಸಂಪಾದಕರಾಗಿ ‘ಹೊಸತು’ ಸಂಚಿಕೆಯನ್ನು ಮುನ್ನಡೆಸುತ್ತಿರುವವರು ಸಾಮಾಜಿಕ ಹೋರಾಟಗಾರರೂ, ಜನಪರ ಚಳವಳಿಗಳ ನಾಯಕರೂ ಆದ ಡಾ|| ಸಿದ್ದನ ಗೌಡ ಪಾಟೀಲರು.

ಸಂಪಾದಕ ಹಾಗೂ ಸಮಾಲೋಚಕ ಮಂಡಳಿಯಲ್ಲಿ ಹೆಸರಾಂತ ಲೇಖಕರು, ಸಾಹಿತಿಗಳು ಇದ್ದಾರೆ. ಸಹ ಸಂಪಾದಕರು : ಇಂದಿರಾಕುಮಾರಿ, ಸಿ.ಆರ್. ಕೃಷ್ಣರಾವ್, ಡಾ|| ಎನ್. ಗಾಯತ್ರಿ, ಡಾ|| ಕೆ.ಎಲ್. ಗೋಪಾಲಕೃಷ್ಣಯ್ಯ, ಡಾ|| ರಾಮಲಿಂಗಪ್ಪ ಟಿ. ಬೇಗೂರು, ಎಸ್. ಸುರೇಂದ್ರ.

ಸಮಾಲೋಚಕ ಮಂಡಲಿ : ಡಾ|| ಟಿ.ಆರ್. ಅನಂತರಾಮು, ಡಾ|| ಎಚ್.ಎಸ್. ಗೋಪಾಲ ರಾವ್, ಡಾ|| ಸಿ. ಆರ್. ಚಂದ್ರಶೇಖರ್, ಡಾ|| ವಿ. ಚಂದ್ರಶೇಖರ ನಂಗಲಿ, ಜಿ. ನಾಗಕುಮಾರ್, ನೇಮಿಚಂದ್ರ, ಡಾ|| ಪ್ರಕಾಶ್ ಸಿ. ರಾವ್, ಡಾ|| ಬರಗೂರು ರಾಮಚಂದ್ರಪ್ಪ, ಡಾ|| ಕೆ.ಮರುಳಸಿದ್ದಪ್ಪ, ಮುರಳೀಧರ್, ಡಾ|| ವಿಜಯಾ, ಡಾ|| ಎಲ್. ಹನುಮಂತಯ್ಯ.

ಪ್ರಕಾಶಕರು : ಡಾ|| ಸಿದ್ದನಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕರು, ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, ೧೫, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಅಂ.ಪೆ. ೫೧೫೯, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-೫೬೦ ೦೦೧ ದೂರವಾಣಿ : ೨೨೧೬೧೯೦೦ , ೨೨೧೬೧೯೦೧

‘ಹೊಸತು’ ಕಚೇರಿ ವಿಳಾಸ:ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, ೧೫, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಅಂ.ಪೆ. ೫೧೫೯, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-೫೬೦ ೦೦೧ ದೂರವಾಣಿ : ೨೨೧೬೧೯೧೧, ೨೨೬೧೬೯೧೨ e-mail: hosathu@gmail.com