AI ಬರುತಿದೆ ದಾರಿ ಬಿಡಿ | AI Barutide Daari Bidi
MRP - ₹270.00 ₹243.00
ಈಗಿನ ಕಾಲದಲ್ಲಿ ಇಲ್ಲಿಯೂ ಇರುವ, ಅಲ್ಲಿಯೂ ಇರುವ, ಎಲ್ಲೆಲ್ಲಿಯೂ ಇರುವ ಕೃತಕ ಬುದ್ಧಿಮತ್ತೆಯ ರಾಜವೀಥಿಗಳಲ್ಲಿ ಜಂಬೂ ಸವಾರಿಯನ್ನು ಮಾಡಬೇಕೆಂಬ ಅಭಿಲಾಷೆಯು ನಿಮಗಿದೆಯೇ? ಎಐಯ ಆಕಾಶಗಂಗೆಯಲ್ಲಿ ವಿನೋದವಿಹಾರಕ್ಕೆ ಹೊರಟು, ಸುಲಭಕ್ಕೆ ಕೈಗೆಟುಕದ ವಿಚಾರಗಳೆಡೆಗೊಂದು ವಿಹಂಗಮ ನೋಟವನ್ನು ಬೆರಗುಗಣ್ಣುಗಳಿಂದ ಬೀರುವ ಆಸೆಯಿದೆಯೇ? ಮತ್ತೇಕೆ ತಡ? ತಂತ್ರಜ್ಞಾನದ ತಾರೆ ನೀಹಾರಿಕೆಗಳ ಕಡೆಗೊಂದು ರೋಮಾಂಚಕಾರಿ ಉಡ್ಡಯನಕ್ಕೆ ಹೀಗೆ ಬನ್ನಿ. ಚಿಟಿಕೆಯಷ್ಟು ಎಐಯ ಸ್ವಾರಸ್ಯಕರವಾದ ಇತಿಹಾಸ, ಬೊಗಸೆಯಷ್ಟು ಅದರ ಬಳಕೆಯ ಬಗೆಗಿನ ಕುತೂಹಲಕಾರಿಯಾದ ವಿವರಗಳು, ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಒಂದಿನಿತು ಇನಿದಾದ ವಿವರಣೆಗಳು, ಒಂದು ಹಿಡಿಯಷ್ಟು ಸಾಹಿತ್ಯದ ಮೇಲೆ ಅದರ ಪರಿಣಾಮಗಳ ಬಗೆಗಿನ ಚಿಂತನೆ, ಭವಿಷ್ಯದ ಮುನ್ಸೂಚನೆ, ಎಐ ಮಾಡುವ ತಪ್ಪುಗಳ ಸ್ವಾರಸ್ಯಗಳು - ಇವೆಲ್ಲವುಗಳ ರಸಮಯ ವೈವಿಧ್ಯವೇ ಇಲ್ಲಿ ಇಡಿಕಿರಿದಿದೆ. `ಶಾಸ್ತ್ರವಿಚಾರಗಳನ್ನು, ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತಿತರ ಗಂಭೀರವಾದ ವಿಚಾರಗಳನ್ನು ಬೋರ್ ಹೊಡೆಸದೆ ಹೇಳುವುದು ನನ್ನ ಜನ್ಮಸಿದ್ಧ ಹಕ್ಕು' ಎಂಬ ಧ್ಯೇಯದೊಂದಿಗೆ ಸನ್ನದ್ಧರಾಗಿರುವ ಲೇಖಕರು ವಿಡಂಬನೆ, ವಕ್ರೋಕ್ತಿಗಳು, ಸರಸೋಕ್ತಿಗಳೊಂದಿಗೆ, ಕಚಗುಳಿಯಿಡುತ್ತ ವಿಚಾರಗಳನ್ನು ಮಂಡಿಸುತ್ತಾರೆ. ಹಾಸ್ಯಪ್ರಜ್ಞೆಯುಳ್ಳ ಗೆಳೆಯರೊಬ್ಬರು ಸಂಜೆಯ ಹಿತವಾದ ತಂಗಾಳಿಗೆ ಚಹಾ ಹೀರುತ್ತಾ, ಅರ್ಥವಾಗದೆ ಮಂಡೆ ಬೆಚ್ಚಗೆ ಮಾಡಬಲ್ಲ ತಾಂತ್ರಿಕ ವಿಚಾರಗಳನ್ನು ಕಥೆಯೊಂದನ್ನು ಹೇಳಿದಂತೆ ಕುತೂಹಲಕಾರಿಯಾಗಿ, ಅಲ್ಲಲ್ಲಿ ನಗಿಸುತ್ತಾ ವಿವರಿಸಿದಂತಿರುವ ಆತ್ಮೀಯವಾದ ನಿರೂಪಣೆಯು ಈ ಪುಸ್ತಕದಲ್ಲಿದೆ. ಇದನ್ನೋದಿ, ಭೋಜನಕೂಟಗಳಲ್ಲಿಯೋ, ಸ್ನೇಹಿತರ ಗೋಷ್ಠಿಗಳಲ್ಲಿಯೋ ತಂತ್ರಜ್ಞಾನ ಮತ್ತು ವಿಜ್ಞಾನವನ್ನು ರಸವತ್ತಾಗಿ ವರ್ಣಿಸುವ ಆಸಕ್ತಿಯು ನಿಮ್ಮಲ್ಲಿ ಕುದುರಿದರೆ, ಅದಕ್ಕೆ ನಾವು ಹೊಣೆಗಾರರಲ್ಲ
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications

Books from ಶರತ್ ಭಟ್ ಸೇರಾಜೆ, Sharath Bhat Seraje