ಆಡಿ ಕಲಿ : ಪದಗಳ ಆಟ|Aadi Kali : Padagala Aata
MRP - ₹50.00 ₹45.00
ಕನ್ನಡದ ಮಕ್ಕಳು ಮೊದಲು ಕನ್ನಡ ಭಾಷೆಯನ್ನು ಕಲಿಯಲೆಂಬ ಹಂಬಲವೇ ಈ ಪುಸ್ತಕ ರಚನೆಯ ಹಿಂದಿನ ಉದ್ದೇಶ. ಎಳವೆಯಲ್ಲೇ ಕಲಿಯಬೇಕಾದ ಕನ್ನಡವನ್ನು ಇಂದು ನಮ್ಮ ಶಾಲೆಗಳಲ್ಲಿ ಎರಡನೆಯ ಭಾಷೆಯಾಗಿ ಕಲಿಸಲ್ಪಡುವ ಹಿನ್ನೆಲೆಯಲ್ಲಿ ಇದು ಪ್ರಕಟವಾಗುತ್ತಿದೆ. ನಾವು ಸ್ವಯಂ ಪ್ರೇರಣೆಯಿಂದಲೇ ಕನ್ನಡ ಕಲಿಯಬೇಕಾಗಿದೆ; ಅದನ್ನು ಪ್ರೀತಿಸಿ, ಬೆಳೆಸಿ, ಉಳಿಸಬೇಕಾಗಿದೆ. ಇದನ್ನು ಮನಗಂಡು ರೂಪಿಸಿದ ಈ ವಿಧಾನವು ಪದಗಳೊಂದಿಗೆ ಆಟವಾಡುತ್ತಲೇ ಪಾಠವನ್ನೂ, ಕನ್ನಡವನ್ನೂ ಒಟ್ಟಿಗೇ ಕಲಿಸಬಲ್ಲದು. ಪದಗಳ ಸಂಯೋಜನೆ, ಪ್ರಾಸಬದ್ಧ ಪದಗಳ ಜೋಡಣೆಯನ್ನು ಇಲ್ಲಿ ಕೊಟ್ಟಿರುವ ಚಿತ್ರಗಳ ಸಹಾಯದಿಂದ ಬೇಗನೇ ಗುರುತಿಸಬಹುದು. ಪುಟ ತೆರೆದಂತೆ ವಿಧವಿಧವಾದ ಚಮತ್ಕಾರಗಳಿಂದ ಕೂಡಿದ ಅಧ್ಯಾಯಗಳು ಓದುಗರನ್ನು ಸ್ವಾಗತಿಸುತ್ತವೆ; ತುಂಟ ಪ್ರಶ್ನೆ ಕೇಳುತ್ತವೆ; ಮಾತ್ರವಲ್ಲ - ತಬ್ಬಿಬ್ಬುಗೊಳಿಸುತ್ತವೆ. ಆದರೆ ಇಲ್ಲಿರುವ ಸುಳಿವುಗಳು ಜಾಣರಾದ ಮಕ್ಕಳಿಗೆ ಅದೊಂದು ಮನರಂಜನೆಯ ಕಲಿಕೆಯಾಗಿ ಸಂತೊಷವನ್ನು ನೀಡಬಲ್ಲದು.
Dispatched within 2 - 3 Business Days
FREE Home Delivery (For purchase of Rs 499/- and above)
Product Specifications