ಕಿರುಪರಿಚಯ ಸಮಗ್ರ ಪರಿಚಯಕ್ಕಾಗಿ ಕ್ಲಿಕ್ಕಿಸಿ

ನವಕರ್ನಾಟಕ ಪ್ರಕಾಶನ ಈಗ ತಾನೆ ಚಿನ್ನದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಈ ಸಂಸ್ಥೆ 1960ರಿಂದ ಐದು ದಶಕಗಳ ಕಾಲ ನಿರಂತರವಾಗಿ ಪುಸ್ತಕಗಳ ಪ್ರಕಾಶನ-ಪ್ರದರ್ಶನ-ಮಾರಾಟ ಚಟುವಟಿಕೆ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದಾದ್ಯಂತ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಬಂದಿದೆ. ’ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬುದೇ ಇದರ ಧ್ಯೇಯವಾಕ್ಯ.

ಈವರೆಗೆ 3100ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರತಂದಿರುವ ನವಕರ್ನಾಟಕ ಪ್ರಕಾಶನದ ಅನೇಕ ಶೀರ್ಷಿಕೆಗಳು ಹಲವಾರು ಮರುಮುದ್ರಣಗಳನ್ನು ಕಂಡಿರುವುದು ಅವುಗಳ ಜನಪ್ರಿಯತೆಗೆ ಸಾಕ್ಷಿ. ಜನಪರ ಸಾಹಿತ್ಯ ಪ್ರಸಾರದ ಮೂಲಕ ನಾಡಿನ ಬುದ್ಧಿಜೀವಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಓದುಗರ ದೊಡ್ಡ ಬಳಗವನ್ನೇ ಈ ಸಂಸ್ಥೆ ಹೊಂದಿದೆ. ಪ್ರಕಾಶನ ಕ್ಷೇತ್ರದ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೂಡ ತನ್ನದಾಗಿಸಿಕೊಂಡಿದೆ. ಬೆಂಗಳೂರು, ಮೈಸೂರು, ಮಂಗಳೂರು, ಗುಲಬರ್ಗಾ ನಗರಗಳಲ್ಲಿ ಸುಸಜ್ಜಿತ ಖಾಯಂ ಮಳಿಗೆಗಳನ್ನು ಹೊಂದಿರುವುದಲ್ಲದೆ ವರ್ಷಂಪ್ರತಿ ರಾಜ್ಯಾದ್ಯಂತ ನೂರಾರು ಕಡೆ ಪುಸ್ತಕ ಪ್ರದರ್ಶನಗಳನ್ನು ನಡೆಸುತ್ತ ಓದುಗರಿರುವಲ್ಲಿಗೇ ಸದಭಿರುಚಿಯ ಪುಸ್ತಕಗಳನ್ನು ಒಯ್ಯುವುದು ನವಕರ್ನಾಟಕ ಪ್ರಕಾಶನದ ವೈಶಿಷ್ಟ್ಯವಾಗಿದೆ.

ಕನ್ನಡ ಪುಸ್ತಕ ಸಂಸ್ಕೃತಿಯನ್ನು ಹರಡಲು ಗಣನೀಯ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ 2006ರ ’ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಪ್ರಶಸ್ತಿ ನೀಡಿ ಗೌರವಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತು 2010ರ ’ಅತ್ಯುತ್ತಮ ಪ್ರಕಾಶಕ-ಅಂಕಿತ ಪುಸ್ತಕ-ಪುರಸ್ಕಾರ’ವನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆಗೆ ನೀಡಿದೆ.

ತನ್ನ ಪ್ರಕಟಣೆಗಳ ಮೂಲಕ ಎಲ್ಲ ಪ್ರಗತಿಪರರೊಂದಿಗೆ, ಜನಪರ ಚಳುವಳಿಗಳೊಂದಿಗೆ ಗುರುತಿಸಿಕೊಂಡಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆ ಕಳೆದ ಹನ್ನೆರಡು ವರ್ಷಗಳಿಂದ ಪತ್ರಿಕಾರಂಗದಲ್ಲೂ ಸೇವೆ ಸಲ್ಲಿಸುತ್ತ ಬಂದಿದೆ. ಸಮಕಾಲೀನ ವಿಷಯಗಳಿಗೆ ಸ್ಪಂದಿಸುತ್ತ, ಓದುಗರನ್ನು ಚಿಂತನೆಗೆ ಪಚೋದಿಸುವ ’ಹೊಸತು’ ತಿಂಗಳ ಪತ್ರಿಕೆ ’ನೆಮ್ಮದಿಯ ನಾಳೆ ನಮ್ಮದು’ ಎಂಬ ಆಶಯದೊಂದಿಗೆ ಪ್ರಜ್ಞಾವಂತ ಓದುಗರ ಆತ್ಮೀಯ ಸಂಗಾತಿಯಾಗಿ ರೂಪುಗೊಂಡಿದೆ.

ನವಕರ್ನಾಟಕ ಪ್ರಕಾಶನದ ಚಟುವಟಿಕೆಗಳು ಸದಾ ಹೊಸ ಹೊಸ ಯೋಜನೆಗಳನ್ನು ಸಾಕಾರಗೊಳಿಸುವ ಆಶಯದಿಂದ ತುಂಬಿರುತ್ತವೆ. ಕನ್ನಡದ ಸಹೃದಯಿ ಓದುಗರು ನೀಡುತ್ತ ಬಂದಿರುವ ಪ್ರೋತ್ಸಾಹ, ಸಹಕಾರಗಳೇ ನವಕರ್ನಾಟಕದ ಚಟುವಟಿಕೆಗಳಿಗೆ ಚಿರಂತನ ಸ್ಫೂರ್ತಿ.

ಪ್ರಗತಿಶೀಲ ಚಳುವಳಿಯೊಂದಿಗೆ ಹೀಗೆ ಹೆಜ್ಜೆ ಹಾಕುತ್ತಿರುವ ನವಕರ್ನಾಟಕ ಪ್ರಕಾಶನಕ್ಕೆ ನಿಮ್ಮ ಬೆಂಬಲ ಸದಾ ಇರಲಿ. ಜನಪರ ಪುಸ್ತಕ ಸಂಸ್ಕೃತಿ ಉಳಿಸಿ; ಬೆಳೆಸಿ.





jeux de casino
ಪುಸ್ತಕ ಬಿಡುಗಡೆ
 
ಸುದ್ದಿಗಳು
 
ಸುದ್ದಿಯ ಮಿಂಚಂಚೆ
ಸುದ್ದಿಯ ಮಿಂಚಂಚೆ ಪಡೆಯಲು ನಿಮ್ಮ ಈಮೈಲ್ ವಿಳಾಸವನ್ನು ನೊಂದಾಯಿಸಿ

 
 
 
ಮುಖಪುಟ | ನಮ್ಮ ಬಗ್ಗೆ | ಕಾರ್ಯಕ್ರಮಗಳು | ವಿಮರ್ಶೆಗಳು | ಬೇಡಿಕೆ | ಹೊಸತು-ತಿಂಗಳ ಪತ್ರಿಕೆ| ಸಂಪರ್ಕಿಸಿ

Copyright © 2011. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್., ಬೆಂಗಳೂರು.