|
|

 |
Rs. 85 |
10% |
Rs. 77/- |  |
 |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಲಯಾಳಂ ಭಾಷೆಯ ಕೆಲವು ಶ್ರೇಷ್ಠ ಕಥೆಗಾರರ ಅನುವಾದಿತ ಕಥೆಗಳು ಇಲ್ಲಿ ಸಂಕಲಿತಗೊಂಡಿವೆ. ಇವು ಬದುಕನ್ನು ಇದ್ದಂತೆಯೇ ಚಿತ್ರಿಸಿಕೊಡುವ, ಮುಖವಾಡಗಳನ್ನೇನೂ ಹೊಂದಿಲ್ಲದ ನೈಜತೆಯ ನೋಟಗಳು. ನಾವು ಗಮನಿಸಿಯೂ ಅಲಕ್ಷಿಸಿಬಿಡುವ ಸಂಗತಿಗಳು. ಕಥೆಗಳು ಸ್ವಲ್ಪ ಹಿಂದಿನ ಕಾಲದವು. ಆದ್ದರಿಂದ ಕಂಡು ಕಾಣದಂತಿರುವ ಕಥೆಯಾಳದಲ್ಲಿ ಹುದುಗಿದ ನೀತಿಯನ್ನು ಪತ್ತೆ ಮಾಡಲು ನಾವು ಒಳಗಣ್ಣನ್ನು ತೆರೆಯಬೇಕಾಗುತ್ತದೆ. ಹೊಟ್ಟೆಪಾಡಿಗಾಗಿ ಹಲವು ವೇಷಗಳು - ಹಲವಾರು ನಡವಳಿಕೆಗಳು. ಕೆಲವು ಉನ್ನತ, ಇನ್ನು ಕೆಲವು ತಿರಸ್ಕೃತ! ಕ್ರೌರ್ಯ - ವಂಚನೆಗಳು, ಪಲಾಯನವಾದೀ ಸೂತ್ರಗಳು ಮುಂತಾದ ಹಲವು ಹತ್ತು ಮಾನವ ಮನಸ್ಸುಗಳು ಇಲ್ಲಿ ಕೇಂದ್ರೀಕರಿಸಿ ನಮ್ಮನ್ನು ಬೆರಗುಗೊಳಿಸುತ್ತವೆ. ವ್ಯವಸ್ಥೆಯ ಪಲ್ಲಟದಿಂದ ಕಾರಣಾಂತರಗಳಿಂದ ದಾರಿ ತಪ್ಪಿದ ಯುವ ಜನಾಂಗವನ್ನು ಸರಿದಾರಿಗೆ ತರುವಲ್ಲಿ ಕಥೆಗಳ ಚಿಂತನೆ ನಡೆದಿದೆ. ನಿರ್ಗತಿಕ ಜನರ ದುರ್ಗತಿಗೆ ನಾವೂ ಕಾರಣವೆಂಬ ಸತ್ಯ ತಿಳಿಸುವುದೇ ಈ ಕಥೆಗಳ ಮೂಲ ಸ್ರೋತವಾಗಿದೆ.
|
| | |
|
|
|
|
|
|
|
|