ಕುಲದ ನೆಲೆ|Kulada Nele
MRP - ₹135.00 ₹121.50
ಹಳೆಯದು ಹೋಗಿ ಹೊಸದು ಬರುತ್ತಿರುತ್ತದೆ. ಆಚಾರ-ವಿಚಾರ-ಸಂಸ್ಕೃತಿಗಳೂ ಹಾಗೇ. ಅಂದಿನದು ಅಂದಿಗೆ-ಇಂದಿನದು ಇಂದಿಗೆ. ಬದುಕು ಹರಿವ ನದಿಯ ನೀರಿನಂತೆ. ಈ ಕ್ಷಣ ಇಲ್ಲಿದ್ದ ನೀರು ಮುಂದಿನ ಕ್ಷಣಕ್ಕೆ ಮುಂದೆ ಹರಿದಿರುತ್ತದೆ. ತುಂಬಿದ ಕುಟುಂಬವೊಂದರ ಆರನೇ ತಲೆಮಾರಿನವರೆಗಿನ ಕಥನವೇ ಈ ಕಾದಂಬರಿ. ಇಲ್ಲಿ ಎಲ್ಲವೂ ಇದೆ. ಸಹನೆ-ಶಾಂತಿ-ರೌದ್ರ-ಕ್ರೌರ್ಯ-ಶೋಷಣೆ-ಅಮಾನವೀಯತೆ-ಯಾವುದಿಲ್ಲ ಈ ಭೂಮಿಯ ಮೇಲೆ? ಇದೇ ಬದುಕು. ಬಾಳಿನ ಜನ ಎಲ್ಲವನ್ನೂ ಅನುಭವಿಸಿ ಸಂದು ಹೋಗಿದ್ದಾರೆ. ಕಥೆಯನ್ನಷ್ಟೇ ಉಳಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯ ಹಿಡಿತದಲ್ಲಿ ಒಳಿತನ್ನೋ ಕೆಡುಕನ್ನೋ ಸಂಪ್ರದಾಯ ಎಂಬ ಹೆಸರಿನಿಂದ ಹೇರಲಾಗುತ್ತದೆ. ಕಟ್ಟುಪಾಡು-ದ್ವಂದ್ವಗಳ ಗೊಂದಲದಿಂದ ಹೊರಬರಲಾಘದ ಅಸಹಾಯಕತೆ. ರೂಪುಗೊಂಡ ಸಮಾಜದ ಕಟ್ಟಲೆಗಳು ಸಾರ್ವತ್ರಿಕವಾಗಿ ಅಂಗೀಕಾರವಾದಲ್ಲಿ ನೆಮ್ಮದಿ. ಇಲ್ಲವಾದಲ್ಲಿ ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ ಎಂಬಂತಾಗಬಹುದು. ಈ ಕಾದಂಬರಿ ನಮಗೆ ಜೀವನದ ಎಲ್ಲ ಮಗ್ಗಲುಗಳನ್ನು ತೆರೆದು ತೋರಿಸುತ್ತಿದೆ. ಬದಲಾವಣೆಯ ಗಾಳೀ ಬೀಸುತ್ತಲೇ ಎಲ್ಲೋ ಇದ್ದ ಬೀಜವು ಇನ್ನೆಲ್ಲೋ ಹಾರಿ ಹೋಗಿ ಎಲ್ಲೋ ಮೊಳೆತು ಚಿಗುರಿ ಹೆಮ್ಮರವಾದೀತು. ಆ ಮರದ ಬೀಜಗಳ ಗತಿಯೂ ಅಷ್ಟೇ. ಕಥಾಸಾರಾಂಶವೆಂದರೆ ಪುಟ್ಟ ಬೀಜವೆ ತಾನೇ!
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಹಳೆಯದು ಹೋಗಿ ಹೊಸದು ಬರುತ್ತಿರುತ್ತದೆ. ಆಚಾರ-ವಿಚಾರ-ಸಂಸ್ಕೃತಿಗಳೂ ಹಾಗೇ. ಅಂದಿನದು ಅಂದಿಗೆ-ಇಂದಿನದು ಇಂದಿಗೆ. ಬದುಕು ಹರಿವ ನದಿಯ ನೀರಿನಂತೆ. ಈ ಕ್ಷಣ ಇಲ್ಲಿದ್ದ ನೀರು ಮುಂದಿನ ಕ್ಷಣಕ್ಕೆ ಮುಂದೆ ಹರಿದಿರುತ್ತದೆ. ತುಂಬಿದ ಕುಟುಂಬವೊಂದರ ಆರನೇ ತಲೆಮಾರಿನವರೆಗಿನ ಕಥನವೇ ಈ ಕಾದಂಬರಿ. ಇಲ್ಲಿ ಎಲ್ಲವೂ ಇದೆ. ಸಹನೆ-ಶಾಂತಿ-ರೌದ್ರ-ಕ್ರೌರ್ಯ-ಶೋಷಣೆ-ಅಮಾನವೀಯತೆ-ಯಾವುದಿಲ್ಲ ಈ ಭೂಮಿಯ ಮೇಲೆ? ಇದೇ ಬದುಕು. ಬಾಳಿನ ಜನ ಎಲ್ಲವನ್ನೂ ಅನುಭವಿಸಿ ಸಂದು ಹೋಗಿದ್ದಾರೆ. ಕಥೆಯನ್ನಷ್ಟೇ ಉಳಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯ ಹಿಡಿತದಲ್ಲಿ ಒಳಿತನ್ನೋ ಕೆಡುಕನ್ನೋ ಸಂಪ್ರದಾಯ ಎಂಬ ಹೆಸರಿನಿಂದ ಹೇರಲಾಗುತ್ತದೆ. ಕಟ್ಟುಪಾಡು-ದ್ವಂದ್ವಗಳ ಗೊಂದಲದಿಂದ ಹೊರಬರಲಾಘದ ಅಸಹಾಯಕತೆ. ರೂಪುಗೊಂಡ ಸಮಾಜದ ಕಟ್ಟಲೆಗಳು ಸಾರ್ವತ್ರಿಕವಾಗಿ ಅಂಗೀಕಾರವಾದಲ್ಲಿ ನೆಮ್ಮದಿ. ಇಲ್ಲವಾದಲ್ಲಿ ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ ಎಂಬಂತಾಗಬಹುದು. ಈ ಕಾದಂಬರಿ ನಮಗೆ ಜೀವನದ ಎಲ್ಲ ಮಗ್ಗಲುಗಳನ್ನು ತೆರೆದು ತೋರಿಸುತ್ತಿದೆ. ಬದಲಾವಣೆಯ ಗಾಳೀ ಬೀಸುತ್ತಲೇ ಎಲ್ಲೋ ಇದ್ದ ಬೀಜವು ಇನ್ನೆಲ್ಲೋ ಹಾರಿ ಹೋಗಿ ಎಲ್ಲೋ ಮೊಳೆತು ಚಿಗುರಿ ಹೆಮ್ಮರವಾದೀತು. ಆ ಮರದ ಬೀಜಗಳ ಗತಿಯೂ ಅಷ್ಟೇ. ಕಥಾಸಾರಾಂಶವೆಂದರೆ ಪುಟ್ಟ ಬೀಜವೆ ತಾನೇ!
Books from ಸುಶೀಲಾ ಕೆ, Susheela K